Current Date 25 Aug, 2026

"ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪ ಮಾಡ್ತಿರೋದು ದುರಾದೃಷ್ಟಕರ"

ದೊಡ್ಮನೆಯಲ್ಲಿ ವಿಚ್ಛೇದನದ ಇಂತಹದ್ದೊಂದು ಪ್ರಕರಣ ಇದೇ ಮೊದಲು. ಯುವ ರಾಜ್‌ಕುಮಾರ್ ಡಿವೋರ್ಸ್ ಪ್ರಕರಣ ಸ್ಯಾಂಡಲ್‌ವುಡ್ ಸಂಚಲನ ಸೃಷ್ಟಿಸಿದೆ. ಇಂತಹದ್ದೊಂದು ಕ್ಷಣವನ್ನು ನಿರೀಕ್ಷೆ ಮಾಡದ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಆದರೆ, ಆರೋಪ- ಪ್ರತ್ಯಾರೋಪಗಳು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.

ಈ ವೇಳೆ ಶ್ರೀದೇವಿ ಬೈರಪ್ಪ ಅವರಿಗೂ ಅಕ್ರಮ ಸಂಬಂಧವಿದೆ ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ಶ್ರೀದೇವಿ ಬೈರಪ್ಪ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೆ, ಒಬ್ಬ ಹೆಣ್ಣಿನ ಬಗ್ಗೆ ಹೀಗೆಲ್ಲ ಮಾತಾಡಿದ್ದು ನೋವುಂಟು ಮಾಡಿದೆ ಎಂದಿದ್ದಾರೆ. ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಪೋಸ್ಟ್‌ನ ಸಾರಾಂಶ ಹೀಗಿದೆ.